ಇವರಲ್ಲಿ ಮೊದಲು ಯಾವ ನಿರ್ಮಾಪಕನ ಕೈ ಹಿಡಿಯಲಿದ್ದಾರೆ ಪುನೀತ್ ರಾಜಕುಮಾರ್?

ಬೆಂಗಳೂರು| Krishnaveni K| Last Modified ಶನಿವಾರ, 17 ಏಪ್ರಿಲ್ 2021 (09:29 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುವರತ್ನ ಸಿನಿಮಾ ಬಳಿಕ ಹೊಸದಾಗಿ ಎರಡು ಭರ್ಜರಿ ನಿರ್ಮಾಣದ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
 > ಈ ಪೈಕಿ ಮೊದಲನೆಯದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶಿಸಲಿರುವ ಜಯಣ್ಣ ನಿರ್ಮಾಣದ ಸಿನಿಮಾ. ಇನ್ನೊಂದು ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಪವನ್ ಕುಮಾರ್ ನಿರ್ದೇಶನದ ಸಿನಿಮಾ.>   ಈ ಪೈಕಿ ಪುನೀತ್ ಮೊದಲು ಮಾಡಲಿರುವ ಸಿನಿಮಾ ಯಾವುದು? ಮೊದಲು ಒಪ್ಪಿಕೊಂಡಿದ್ದನ್ನು ಮೊದಲು ಮುಗಿಸಲಿದ್ದಾರಂತೆ ಪುನೀತ್. ಅಂದರೆ ದಿನಕರ್ ಸಿನಿಮಾ ಮುಗಿಸಿಕೊಟ್ಟ ಮೇಲೆಯೇ ಹೊಂಬಾಳೆ ಫಿಲಂಸ್ ನಿರ್ಮಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈನಿಂದ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.ಇದರಲ್ಲಿ ಇನ್ನಷ್ಟು ಓದಿ :