ಬೆಂಗಳೂರು: ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ತ್ ಡೇ ಇದೆ. ಆದರೆ ಈ ಬಾರಿ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದೇ ಇರಲು ಪುನೀತ್ ತೀರ್ಮಾನಿಸಿದ್ದಾರೆ.ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಒಂದು ವಾರ ಕಾಲ ಕರ್ನಾಟಕದಲ್ಲಿ ಸಾಮೂಹಿಕವಾಗಿ ಜನರು ಸೇರುವುದನ್ನು ಅಂತಹ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ. ಹೀಗಾಗಿ ತಮ್ಮ ಹುಟ್ಟುಹಬ್ಬವನ್ನು ಜನರೊಂದಿಗೆ ಆಚರಿಸಲು ಪುನೀತ್ ಮುನ್ನೆಚ್ಚರಿಕೆಯ ಕ್ರಮವಾಗಿ ಹಿಂದೇಟು ಹಾಕಿದ್ದಾರೆ.ಎಲ್ಲಾ ಅಭಿಮಾನಿ ದೇವರಿಗೆ ನನ್ನ ನಮಸ್ಕಾರ. ಈ ವರ್ಷ