ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಕಳೆದ ಕೆಲವು ಸಮಯದಿಂದ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದರು. ಒಂದು ಉತ್ತಮ ಸಿನಿಮಾ ಮಾಡಿ ಮತ್ತೆ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಬೇರೆ ಬೇರೆ ಪ್ರಯತ್ನ ಮಾಡಿದರೂ ಯಾಕೋ ಗಣೇಶ್ ಲಕ್ ಕುದುರಿರಲಿಲ್ಲ. ಆದರೆ ಈಗ ಗೀತಾ ಸಿನಿಮಾ ಗಣೇಶ್ ಗೆ ಹೊಸ ಇಮೇಜ್ ತಂದುಕೊಡುವ ಹಾಗಿದೆ. ಗೋಕಾಕ್ ಚಳವಳಿಯ ಹೀರೋಗಳಿಗೆ ಅರ್ಪಿಸಿ ಕನ್ನಡದ ಹೋರಾಟದ ಬಗೆಗಿರುವ ಸಿನಿಮಾ ಗೀತಾ. ಈ ಸಿನಿಮಾ ಮೂಲಕ