ಬೆಂಗಳೂರು: ನಾಗೇಂದ್ರ ಪ್ರಸಾದ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ವೀಕ್ಷಕರಿಗೆ ಅಚ್ಚರಿಯೊಂದನ್ನು ಚಿತ್ರತಂಡ ನೀಡುತ್ತಿದೆ. Photo Courtesy: Twitterಈ ಸಿನಿಮಾದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಗಳಾದ ಪ್ರಭುದೇವ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣ ಈಗ ವಿಶೇಷ ಸೆಟ್ ನಲ್ಲಿ ನಡೆದಿದೆ.ಪವರ್ ಸ್ಟಾರ್ ಪುನೀತ್, ಪ್ರಭುದೇವ ಸೆಟ್ ನಲ್ಲಿ ಚಿತ್ರತಂಡದೊಂದಿಗಿರುವ ಫೋಟೋ ಎಲ್ಲೆಡೆ ವೈರಲ್