ಬೆಂಗಳೂರು: ಮೊನ್ನೆಯಷ್ಟೇ ಯುವರತ್ನ ಸಿನಿಮಾದ ‘ಪವರ್ ಆಫ್ ಯೂಥ್’ ಹಾಡು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಮತ್ತೊಂದು ಹಾಡಿನ ಧ್ವನಿ ಮುದ್ರಣವಾಗಿದೆ. ವಿಶೇಷವೆಂದರೆ ಈ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿ ನೀಡಿದ್ದಾರೆ. ‘ಊರಿಗೊಬ್ಬ ರಾಜ’ ಎಂಬ ಮಾಸ್ ಹಾಡನ್ನು ಪುನೀತ್ ಹಾಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂಗೀತ ನಿರ್ದೇಶಕ ತಮನ್ ಎಸ್. ಪುನೀತ್ ಅದ್ಭುತವಾಗಿ ಹಾಡಿದ್ದಾರೆ ಎಂದಿದ್ದಾರೆ. ಈ ಮೊದಲೂ ಪುನೀತ್ ಹಲವು