ಬೆಂಗಳೂರು: ಅಭಿಮಾನಿಗಳನ್ನು ದೇವರು ಎಂದೇ ಪರಿಗಣಿಸುವುದು ಡಾ. ರಾಜ್ ಕುಟುಂಬದ ಪದ್ಧತಿ. ಅದನ್ನು ರಾಜ್ ಪುತ್ರರೂ ಪಾಲಿಸಿಕೊಂಡು ಬರುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಬಂದ ಅಭಿಮಾನಿಯೊಬ್ಬರಿಗೆ ಸ್ವಲ್ಪ ಏರು ದನಿಯಲ್ಲಿ ಕೂಗಾಡಿದ ವಿಡಿಯೋ ಈಗ ವೈರಲ್ ಆಗಿದೆ.ಪುನೀತ್ ಮನೆಯಲ್ಲಿದ್ದ ಸಂದರ್ಭವಾಗಿದ್ದರಿಂದ ಅವರನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಬಂದು ನಿಂತಿದ್ದರು. ಈ ಸಂದರ್ಭದಲ್ಲಿ ಪುನೀತ್ ಅರ್ಜೆಂಟ್ ಆಗಿ ಎಲ್ಲಿಗೋ ಹೋಗಬೇಕಿತ್ತು. ಅದರ ಬ್ಯುಸಿಯಲ್ಲಿದ್ದರೋ