ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಬೆಂಗಳೂರು, ಬುಧವಾರ, 10 ಜುಲೈ 2019 (08:42 IST)

ಬೆಂಗಳೂರು: ಯುವರತ್ನ ಸಿನಿಮಾ ಶೂಟಿಂಗ್ ಸಂದರ್ಭ ಮೈಸೂರಿನಲ್ಲಿ ಕೆಲವು ದಿನ ಕಳೆದಿದ್ದ ಪುನೀತ್ ರಾಜ್ ಕುಮಾರ್ ಅಲ್ಲಿನ ಅಭಿಮಾನಿಗಳಿಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.


 
ಮೈಸೂರಿನ ಕಾಲೇಜು, ಮತ್ತಿತರ ಜಾಗದಲ್ಲಿ ಶೂಟಿಂಗ್ ಮಾಡುವಾಗ ಪ್ರತಿನಿತ್ಯ ಪವರ್ ಸ್ಟಾರ್ ನೋಡಲು ಕಾಣಿಕೆ ಹೊತ್ತು ಅಭಿಮಾನಿಗಳು ಜಮಾಯಿಸುತ್ತಿದ್ದರು. ಈ ಅಭಿಮಾನಿಗಳ ಜತೆ ಆದಷ್ಟು ಸೆಲ್ಫೀ, ಅಟೋಗ್ರಾಫ್ ನೀಡಿ ಖುಷಿ ಕೊಡಲು ಯತ್ನಿಸಿದ್ದೇನೆ. ಸಿಗದೇ ಇದ್ದವರು ಬೇಸರ ಮಾಡಿಕೊಳ್ಳಬೇಡಿ ಎಂದು ಅಪ್ಪು ಮನವಿ ಮಾಡಿದ್ದಾರೆ.
 
ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ ವಿಶೇಷವಾಗಿ ಪುನೀತ್ ಹೇಳಿಕೊಂಡಿದ್ದಾರೆ. ಕಸ್ತೂರಿ ನಿವಾಸ ಎಂದು ಹೆಸರಿಟ್ಟುಕೊಂಡು ಮನೆ ತುಂಬಾ ಅಪ್ಪಾಜಿ ಫೋಟೋ, ಛಾಯಾಚಿತ್ರಗಳನ್ನು ಹಾಕಿಕೊಳ್ಳುವ ಅಭಿಮಾನಿಯೊಬ್ಬರ ಅಭಿಮಾನವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಅಭಿಮಾನಿಗಳಿಂದಲೇ ನಾವಿದ್ದೇವೆ. ನಿಮ್ಮ ಪ್ರೀತಿಗೆ ಚಿರ ಋಣಿ ಎಂದು ಪುನೀತ್ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ...

news

ಮಾಸ್ ಮಾತ್ರವಲ್ಲದೆ ಮನರಂಜನೆಯಲ್ಲಿಯೂ ಪಾಸ್ ಆಗಲಿದ್ದಾನೆ `ಸಿಂಗ’!

ಸಿನಿಮಾ ಮಾಸ್, ಕ್ಲಾಸ್ ಏನೇ ಇರಲಿ. ಒಂದಿಡೀ ಚಿತ್ರ ಮನರಂಜನೆಯತ್ತ ಫೋಕಸ್ ಮಾಡದಿದ್ದರೆ ಪುಷ್ಕಳ ಗೆಲುವು ...

news

ಹಳ್ಳಿ ಹಿನ್ನೆಲೆಯಲ್ಲಿ `ಸಿಂಗ’ನ ಸಾಹಸ!

ಈಗ ಎತ್ತ ನೋಡಿದರೂ ಸಿಂಗನದ್ದೇ ಸದ್ದು. ಟ್ರೈಲರ್ ಮತ್ತು ಹಾಡಿನ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ...

news

ಸಿಂಗ: ಫ್ಯಾಮಿಲಿ ಪ್ರೇಕ್ಷಕರಿಗೂ ಫುಲ್ ಮೀಲ್ಸ್ ಗ್ಯಾರೆಂಟಿ!

ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷೆಯ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದಲ್ಲಿ ಮೂಡಿ ...