ಬೆಂಗಳೂರು: ಲಾಕ್ ಡೌನ್ ನಿಂದಾಗಿ ಚಿತ್ರೀಕರಣ, ಚಿತ್ರ ಬಿಡುಗಡೆಗೆ ಸ್ಥಗಿತಗೊಂಡಿದ್ದರೆ, ತೆರೆ ಹಿಂದಿನ ಕೆಲಸಗಳು ನಡೆಯುತ್ತಿವೆ. ಪುನೀತ್ ರಾಜಕುಮಾರ್, ಕೂಡಾ ಈಗ ತಮ್ಮ ಮೂರನೇ ಸಿನಿಮಾ ನಿರ್ಮಾಣ ಕೆಲಸಕ್ಕೆ ಕೈ ಹಾಕಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕವಲು ದಾರಿ, ಮಾಯಾಬಜಾರ್ 2016 ಎಂಬ ಎರಡು ಉತ್ತಮ ಸಿನಿಮಾಗಳನ್ನು ತಮ್ಮ ಬ್ಯಾನರ್ ಮೂಲಕ ನಿರ್ಮಿಸಿ ಗೆದ್ದಿದ್ದಾರೆ. ಇದೀಗ ಮೂರನೇ ಸಿನಿಮಾಗೆ ತಯಾರಿ ನಡೆಸಿದ್ದಾರೆ.ಫ್ಯಾಮಿಲಿ ಪ್ಯಾಕ್ ಎನ್ನುವ ಹೊಸ ಸಿನಿಮಾ ಪುನೀತ್ ನಿರ್ಮಿಸಲಿದ್ದಾರೆ.