ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದಾಗಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.ತಮ್ಮ ಸಾವಿಗೆ ಮುನ್ನ ಪುನೀತ್ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆ ಸಿನಿಮಾಗಳೀಗ ಕಥಾನಾಯಕನಿಲ್ಲದೇ ಅನಾಥವಾಗಿದೆ.ದ್ವಿತ ಸಿನಿಮಾದಲ್ಲಿ ಪುನೀತ್ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿತ್ತು. ಜೇಮ್ಸ್ ಮುಗಿಸಿ ದ್ವಿತ ಸಿನಿಮಾದಲ್ಲಿ ಪುನೀತ್ ತೊಡಗಿಸಿಕೊಳ್ಳುವವರಿದ್ದರು. ಇದಲ್ಲದೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಹೊಸ ಸಿನಿಮಾಗೆ ಸಹಿ ಹಾಕಿದ್ದರು. ದ್ವಿತ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರುತ್ತಿತ್ತು. ಇತ್ತೀಚೆಗೆ ‘ಪೃಥ್ವಿ’ ನಿರ್ದೇಶಕ