ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಜನ್ಮದಿನವಾಗಿದ್ದು, ಈ ಬಾರಿ ನೇರವಾಗಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ರಾಜ್ ಪುತ್ರರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆ ಕಾಲ ಕಳೆಯಲಿದ್ದಾರೆ.ಪ್ರತೀ ವರ್ಷವೂ ಡಾ.ರಾಜ್ ಬರ್ತ್ ಡೇಗೆ ಅಭಿಮಾನಿಗಳು ಸಮಾಧಿಗೆ ಪೂಜೆ ಮಾಡಿ ಅನ್ನದಾಸೋಹ, ರಕ್ತದಾನ ಮುಂತಾದ ಸಮಾಜ ಮುಖೀ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಈ