ನಟ ಪುನೀತ್ ರಾಜ್ಕುಮಾರ್ ನಿಧನರಾಗಿ 11 ದಿನ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು (ನ.8) ಅವರ ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ. 11ನೇ ದಿನದ ಪೂಜೆಯಲ್ಲಿ ಅಪ್ಪು ಕುಟುಂಬದವರು ಭಾಗಿ ಆಗಿದ್ದಾರೆ. ಭಾನುವಾರ (ನ.7) ರಾತ್ರಿಯಿಂದಲೇ ಈ ಕಾರ್ಯಕ್ಕೆ ಸಕಲ ಸಿದ್ಧತೆ ಶುರುವಾಗಿತ್ತು. ಇಂದು ಬೆಳಗ್ಗೆಯೇ ಪುನೀತ್ ರಾಜ್ಕುಮಾರ್ ನಿವಾಸದಲ್ಲಿ ಪೂಜಾ ಕಾರ್ಯಗಳು ಆರಂಭ ಆಗಿವೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ, ವಂದಿತಾ,