ಕನ್ನಡ ಚಿತ್ರರಂಗವೆಂದರೆ ಪರಭಾಷಾ ಚಿತ್ರರಂಗದ ಮಂದಿ ಅಸಡ್ಡೆಯಿಂದ ನೋಡೋ ಕಾಲವೊಂದಿತ್ತು. ಆದರೆ ಈಗ ಕನ್ನಡದ ನೆಲದಲ್ಲಿ ಸಿನಿಮಾವೊಂದು ಅಬ್ಬರಿಸಿದರೆ ಅದರ ಸದ್ದು ಆಸುಪಾಸಿನ ಭಾಷೆಗಳಲ್ಲಿಯೂ ಮಾರ್ಧನಿಸುತ್ತೆ. ಅದೇ ರೀತಿ ಉಡುಂಬಾ ಚಿತ್ರ ಕೂಡಾ ಪರಭಾಷಾ ಚಿತ್ರರಂಗದ ಮಂದಿಯ ಗಮನ ಸೆಳೆದುಕೊಂಡಿದೆ. ಟ್ರೇಲರ್ ಬಂದ ಮೇಲಂತೂ ಬೇರೆ ಬೇರೆ ಭಾಷೆಗಳಲ್ಲಿಯೂ ಉಡುಂಬಾ ಬಗ್ಗೆ ಭರವಸೆ ಮೂಡಿಕೊಂಡಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರೇ ಉಡುಂಬಾನನ್ನು ಮೆಚ್ಚಿಕೊಂಡು ಮಾತಾಡುತ್ತಾರೆಂದರೆ, ಈ