ಪೈಲ್ವಾನ್ ಪ್ರಿ ರಿಲೀಸ್ ಈವೆಂಟ್ ಗೆ ಬಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಹೈದರಾಬಾದ್, ಶನಿವಾರ, 7 ಸೆಪ್ಟಂಬರ್ 2019 (11:23 IST)

ಹೈದರಾಬಾದ್: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.
 


ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪ್ರಿ ರಿಲೀಸ್ ಈವೆಂಟ್ ಗೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಆಗಮಿಸಿದ್ದು ವಿಶೇಷವಾಗಿತ್ತು. ಕುಸ್ತಿ ಪಟುಗಳ ಕತೆಯಾಧಾರಿತ ಸಿನಿಮಾ ಇದಾಗಿದ್ದು, ಈ ಸಿನಿಮಾ ಪ್ರಿ ರಿಲೀಸ್ ಸಮಾರಂಭಕ್ಕೆ ಬ್ಯಾಡ್ಮಿಂಟನ್ ಚಾಂಪಿಯನ್ ವಿಶೇಷ ಅತಿಥಿಯಾಗಿ ಬಂದಿದ್ದಾರೆ.
 
ಸಿಂಧು ಜತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ನಿಮ್ಮನ್ನು ಭೇಟಿಯಾಗಿದ್ದು ಗೌರವ ತಂದಿದೆ ಎಂದಿದ್ದಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಆವೃತ್ತಿಯ ಹಾಡುಗಳು ಅನಾವರಣಗೊಂಡಿವೆ. ಪೈಲ್ವಾನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರೊ ಕಬಡ್ಡಿ ಲೀಗ್ ನಲ್ಲಿ ಶ್ರೀ ಮುರಳಿ ಭರಾಟೆ ಟೀಂ

ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರು ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಪ್ರೊ ಕಬಡ್ಡಿ ಲೀಗ್ ನ್ನು ...

news

‘ಬ್ರಹ್ಮಗಂಟು’ ಲಕ್ಕಿ ಹೊಸ ಸಿನಿಮಾಗೆ ಈ ಖ್ಯಾತ ನಟಿ ನಿರ್ಮಾಪಕಿ!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿಯ ಲಕ್ಕಿ ಪಾತ್ರಧಾರಿ ಭರತ್ ...

news

ರಾಘವೇಂದ್ರ ರಾಜ್ ಕುಮಾರ್ ಈಗ ರಾಜಕೀಯಕ್ಕೆ!

ಬೆಂಗಳೂರು: ಡಾ. ರಾಜ್ ಕುಮಾರ್ ಕುಟುಂಬದ ಯಾರೂ ರಾಜಕೀಯದ ಹತ್ತಿರವೂ ಸುಳಿಯಲ್ಲ. ಆದರೆ ರಾಘವೇಂದ್ರ ರಾಜ್ ...

news

ಕಾಮಿಡಿ ಕಂಪನಿ ಆಯ್ತು, ಈಗ ಜೀ ಕನ್ನಡ ಕಾಮಿಡಿ ಕಿಲಾಡಿಗಳ ಮೇಲೆ ವೀಕ್ಷಕರ ತಗಾದೆ

ಬೆಂಗಳೂರು: ಕಾಮಿಡಿ ಕಂಪನಿ ಎಂಬ ಕಲರ್ಸ್ ಕನ್ನಡದ ಶೋ ಬಗ್ಗೆ ವೀಕ್ಷಕರು ಅಪಸ್ವರವೆತ್ತಿದ ಬೆನ್ನಲ್ಲೇ ಇದೀಗ ...