ಪೈಲ್ವಾನ್ ಪ್ರಿ ರಿಲೀಸ್ ಈವೆಂಟ್ ಗೆ ಬಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಹೈದರಾಬಾದ್| Krishnaveni K| Last Modified ಶನಿವಾರ, 7 ಸೆಪ್ಟಂಬರ್ 2019 (11:23 IST)
ಹೈದರಾಬಾದ್: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.  
> ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪ್ರಿ ರಿಲೀಸ್ ಈವೆಂಟ್ ಗೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಆಗಮಿಸಿದ್ದು ವಿಶೇಷವಾಗಿತ್ತು. ಕುಸ್ತಿ ಪಟುಗಳ ಕತೆಯಾಧಾರಿತ ಸಿನಿಮಾ ಇದಾಗಿದ್ದು, ಈ ಸಿನಿಮಾ ಪ್ರಿ ರಿಲೀಸ್ ಸಮಾರಂಭಕ್ಕೆ ಬ್ಯಾಡ್ಮಿಂಟನ್ ಚಾಂಪಿಯನ್ ವಿಶೇಷ ಅತಿಥಿಯಾಗಿ ಬಂದಿದ್ದಾರೆ.>   ಸಿಂಧು ಜತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ನಿಮ್ಮನ್ನು ಭೇಟಿಯಾಗಿದ್ದು ಗೌರವ ತಂದಿದೆ ಎಂದಿದ್ದಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಆವೃತ್ತಿಯ ಹಾಡುಗಳು ಅನಾವರಣಗೊಂಡಿವೆ. ಪೈಲ್ವಾನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :