ಬೆಂಗಳೂರು: ಚಿರು ಸರ್ಜಾ-ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಗಲ್ಲಿ ಕ್ರಿಕೆಟ್ ಆಡುವ ವಿಡಿಯೋವೊಂದು ಈಗ ವೈರಲ್ ಆಗಿದೆ.ಮೇಘನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಯನ್ ತಮ್ಮ ಏರಿಯಾ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ವಿಡಿಯೋ ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಮೊಬೈಲ್ ಬಿಟ್ಟು ಹೊರಾಂಗಣ ಆಟ ಆಡುವಂತೆ ಪ್ರೇರೇಪಿಸುವುದಾಗಿ ಹೇಳಿಕೊಂಡಿದ್ದಾರೆ.ಇತ್ತೀಚೆಗೆ ಮೇಘನಾ ಅಭಿನಯದ ಸೆಲ್ಫೀಮಮ್ಮಿ ಗೂಗಲ್ ಡ್ಯಾಡೀ ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿ ಮಕ್ಕಳ ಮೊಬೈಲ್ ಚಟದ ಬಗ್ಗೆ ಬೆಳಕು ಚೆಲ್ಲಲಾಗಿತ್ತು.