ಮೇಲುಕೋಟೆಯಲ್ಲಿ ಮನೆ ದೇವರ ದರ್ಶನ ಪಡೆದ ರಚಿತಾ ರಾಮ್

ಬೆಂಗಳೂರು| Ramya kosira| Last Modified ಸೋಮವಾರ, 13 ಸೆಪ್ಟಂಬರ್ 2021 (14:44 IST)
ನಟಿ ರಚಿತಾ ರಾಮ್ ಇತ್ತೀಚೆಗೆ ಮೇಲುಕೋಟೆಗೆ ಭೇಟಿ ನೀಡಿ ತಮ್ಮ ಮನೆ ದೇವರಾದ ಶ್ರೀಚೆಲುವರಾಯಸ್ವಾಮಿಯ ಪಡೆದರು.

ದರ್ಶನದ ಬಳಿಕ ತಾವು ನಾಮಧರಿಸಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳಿಂದ ಸಾಕಷ್ಟು ಕಾಮೆಂಟ್ ಬರುತ್ತಿದೆ. ಪ್ರತಿ ವರ್ಷ ರಚಿತಾ ಮೇಲುಕೋಟೆಗೆ ಭೇಟಿ ನೀಡಿ ಮನೆದೇವರ ದರ್ಶನ ಪಡೆಯುತ್ತಾರೆ.
ಸದ್ಯ ರಚಿತಾ ಕೈಯಲ್ಲಿ “ವೀರಂ’, “ಲವ್ ಯು ರಚ್ಚು’, “ಪಂಕಜ ಕಸ್ತೂರಿ’, “ಲವ್ ಮೀ ಆರ್ ಹೇಟ್ ಮೀ’, “ಶಬರಿ’ ಸೇರಿದಂತೆ ಅನೇಕ ಚಿತ್ರಗಳು ರಚಿತಾ ಕೈಯಲ್ಲಿವೆ.
 
ಇದರಲ್ಲಿ ಇನ್ನಷ್ಟು ಓದಿ :