ಬೆಂಗಳೂರು: ಕೊರೋನಾ ಮಹಾಮಾರಿ ಕೇವಲ ವ್ಯಾಪಾರಿಗಳು, ಉದ್ಯೋಗಸ್ಥರನ್ನು ಮಾತ್ರ ದಿವಾಳಿಯನ್ನಾಗಿ ಮಾಡಿಲ್ಲ. ರೈತನೂ ಕಷ್ಟದಲ್ಲಿದ್ದಾನೆ. ಇಂತಹ ರೈತರಿಗೆ ನೆರವಾಗಲು ಇದೀಗ ನಟಿ ರಚಿತಾ ರಾಮ್ ಮುಂದಾಗಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಕೈ ಜೋಡಿಸಲು ಹೇಳಿದ್ದಾರೆ. ಕೊರೋನಾ ಕಾಲದಲ್ಲಿ ಬೆಳೆದ ಬೆಳೆ ಮಾರಲಾಗದೇ ನಷ್ಟ ಅನುಭವಿಸುತ್ತಿರುವ ಅನ್ನದಾತರಿಗೆ ನನ್ನ ಬೆಂಬಲ ಎಂದಿರುವ ರಚಿತಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನುಲುಬು. ಆತನ ಬೆನ್ನಿಗೆ