ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಸಿನಿಮಾ ಟೈಟಲ್ ಅನೌನ್ಸ್ ಆಗಿದೆ. ಪಂಕಜ ಕಸ್ತೂರಿ ಎಂಬುದು ರಚಿತಾ ಹೊಸ ಸಿನಿಮಾ ಹೆಸರು. ಈ ಮೊದಲು ಕಸ್ತೂರಿ ಮಹಲ್ ಎಂಬ ಸಿನಿಮಾವನ್ನು ರಚಿತಾ ಒಪ್ಪಿಕೊಂಡು, ಬಳಿಕ ಹೊರಬಂದಿದ್ದರು. ಇದೀಗ ರಚಿತಾ ಹೊಸ ಸಿನಿಮಾಗೂ ಕಸ್ತೂರಿ ಹೆಸರು ಅಂಟಿಕೊಂಡಿರುವುದು ವಿಶೇಷ. ಮಯೂರ ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸ ಈಗ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.