ರಚಿತಾ ರಾಮ್ ಸಿಗರೇಟು ಸೇದಲು ಕಾರಣ ಯಾರು ಗೊತ್ತೇ?!

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (09:09 IST)
ಬೆಂಗಳೂರು: ಏಕ್ ಲವ್ ಯಾ ಮೋಷನ್ ಪೋಸ್ಟರ್ ನಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ರಚಿತಾ ರಾಮ್ ಟೀಸರ್ ನಲ್ಲಿ ಸಿಗರೇಟು ಸೇದುವ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
 

ರಚಿತಾರ ಈ ಅವತಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಏಕ್ ಲವ್ ಯಾ ಟೀಸರ್ ಗಿಂತ ರಚಿತಾ ರಾಮ್ ದಮ್ ಎಳೆಯೋದೇ ಸುದ್ದಿಯಾಗಿಬಿಟ್ಟಿದೆ. ಅದೂ ಸಾಲದೆಂಬಂತೆ ಕೊನೆಯಲ್ಲಿ ಲಿಪ್ ಲಾಕ್ ದೃಶ್ಯವೂ ಇದೆ.
 
ಇದರ ಬಗ್ಗೆ ರಚಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ‘ಎಲ್ಲಾ ನಮ್ಮ ನಿರ್ಮಾಪಕರ ಕೃಪೆ’ ಎಂದು ಏಕ್ ಲವ್ ಯಾ ನಿರ್ಮಾಪಕಿ ರಕ್ಷಿತಾ ಪ್ರೇಮ್ ಮೇಲೆ ತಮಾಷೆಯಾಗಿ ದೂರಿಕೊಂಡಿದ್ದಾರೆ. ಅದೇನೇ ಇರಲಿ, ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ರಚಿತಾ ಇಲ್ಲಿ ಮತ್ತೊಂದು ರೀತಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರು ಹುಬ್ಬೇರುವಂತೆ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :