ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ವಿಭಿನ್ನ ಬಗೆಯ ಪಾತ್ರಗಳ ಮೂಲಕ ರಚಿತಾ ನಟಿಯಾಗಿ ಗೆದ್ದಿದ್ದಾರೆ. ಇದೀಗ ನಿರ್ಮಾಣದತ್ತ ಮನಸ್ಸು ಮಾಡಲಿದ್ದಾರಂತೆ. ಅದೂ ತಮ್ಮದೇ ಹೋಂ ಬ್ಯಾನರ್ ನಿರ್ಮಾಣ ಮಾಡುವ ಕನಸು ಹೊಂದಿದ್ದಾರಂತೆ. ಇದರ ಜತೆಗೆ ತಮ್ಮನ್ನು ಇಂಡಸ್ಟ್ರಿಗೆ ಪರಿಚಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಋಣ ಸಂದಾಯ ಮಾಡಲಿದ್ದಾರಂತೆ.ನಾನು ಈವತ್ತು ಸಿನಿಮಾ ರಂಗಕ್ಕೆ ಪರಿಚಯವಾಗಿದ್ದೇ ತೂಗುದೀಪ ಪ್ರೊಡಕ್ಷನ್ ನಿಂದ.