ದಿನೇ ದಿನೇ ಸೆಕ್ಸಿಯಾಗಿ ಕಾಣುತ್ತಿರುವ ತಂಗಿ ರಾಧಿಕ ಕುಮಾರಸ್ವಾಮಿ!

Arunkumar| Last Updated: ಬುಧವಾರ, 23 ಏಪ್ರಿಲ್ 2014 (15:22 IST)
ತಂಗಿ ಪಾತ್ರಕ್ಕೆ ಒಂದು ಕಳೆ ನೀಡಿದ ನಟಿ ರಾಧಿಕ ಕುಮಾರ ಸ್ವಾಮಿ. ಕನ್ನಡ ಚಿತ್ರ ಪ್ರೇಕ್ಷಕರನ್ನು, ಅದರಲ್ಲೂ ಮಹಿಳಾ ಪ್ರೇಕ್ಷಕರನ್ನು ಹೆಚ್ಚು ಮನಸೆಳೆದದ್ದು ತಂಗಿ ಪಾತ್ರಗಳ ಮುಖಾಂತರ.
ನಟಿ ರಾಧಿಕ ಕುಮಾರ ಸ್ವಾಮಿ ತಮ್ಮ ಹೊಸ ರೂಪದಿಂದ ಎಲ್ಲರ ಮನ ಸೆಳೆಯುತ್ತಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ತನ್ನ ಪ್ರತಿಭೆ ಮುಖಾಂತರ ಜನರನ್ಬ್ನು ಸೆಳೆದ ನಟಿ ರಾಧಿಕ. ತನ್ನ ರೂಪ ಮತ್ತು ಅಭಿನಯದ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ಈ ಚೆಲುವೆ ಆನಂತರ ಹಿರಿಯ ರಾಜಕಾರಣಿ ಕುಮಾರ ಸ್ವಾಮಿ ಅವರ ಜೊತೆ ಮಾಡುವೆ ಆಗಿ ಮಗಳು ಶಮಿಕ ಹುಟ್ಟಿದ್ದು ಹಳೆಯ ಕಥೆ

. ಅದಾದ ಬಳಿಕ ಆಕೆ ತನ್ನ

ಲುಕ್ ಬದಲಾಯಿಸಿಕೊಂಡು ಅತ್ಯಂತ ಮುದ್ದಾಗಿ ಮತ್ತೆ ನಿರ್ಮಾಪಕಿ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರು.
ರಮ್ಯ ಮತ್ತು ಯಶ್ ನಟನೆಯ ಲಕ್ಕಿ ಚಿತ್ರವನ್ನು ನಿರ್ಮಿಸಿದರು. ನಂತರ ನಟ ಆದಿತ್ಯ ಜೊತೆ ಸ್ವೀಟಿ ನನ್ನ ಜೋಡಿ ಚಿತ್ರದಲ್ಲಿ ನಟಿಸಿದರು. ಅಲ್ಲದೆ ಅವತಾರಂ ಅನ್ನುವ ತೆಲುಗು ಚಿತ್ರದಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡರು. ಈಗ ಸ್ಯಾಂಡಲ್ ವುಡ್ ಯುವನಟ ಚಿರಂಜೀವಿ ಸರ್ಜಾ ಜೊತೆ ರುದ್ರವತಾರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.

ಒಟ್ಟಾರೆ, ಈಕೆಯ ಹೊಸ ರೂಪದ ಗುಟ್ಟೇನ್ರಿ

ಅಂತಿದ್ದಾರೆ ಆಕೆಯ ವಿರೋಧಿಗಳು !!ಇದರಲ್ಲಿ ಇನ್ನಷ್ಟು ಓದಿ :