ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದಿನ ಮಡದಿ ರಾಧಿಕಾಗಾಗಿ ಆ ಒಂದು ದಿನ ಡಯಟ್ ಎಲ್ಲಾ ಮರೆತಿದ್ದಾರಂತೆ. ಇದು ಮೊನ್ನೆ ನಡೆದ ದೀಪಾವಳಿ ಕತೆ. ದೀಪಾವಳಿಗೆ ತಮಗೆ ಗೊತ್ತಿರುವ, ಇಷ್ಟದ ತಿನಿಸುಗಳನ್ನೆಲ್ಲಾ ಯಶ್ ಗಾಗಿ ಮಾಡಿ ತಿನಿಸಿದ್ದಾರೆ ರಾಧಿಕಾ. ತಮ್ಮ ಕೊಂಕಣಿ ಸ್ಪೆಷಲ್ ಸ್ವೀಟ್, ಬೇಸನ್ ಲಾಡು, ಕೊಬ್ಬರಿ ಲಾಡು ಮಾಡಿ ತಿನಿಸಿದ್ದೋ ತಿನಿಸಿದ್ದು.ಪಾಪ ಮದುವೆಯಾದ ಮೇಲೆ ಮೊದಲನೇ ಹಬ್ಬ. ಯಾಕೆ ರಾಧಿಕಾಗೆ ಬೇಜಾರು ಮಾಡೋದು ಅಂತ