ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಮ್ಮ ಮಕ್ಕಳ ಕ್ಯೂಟ್ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ಈಗ ರಾಧಿಕಾ ಅಂತಹದ್ದೇ ಕ್ಯೂಟ್ ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ. Photo Courtesy: Instagramಪುತ್ರ ಯಥರ್ವ್ ಮತ್ತು ಪುತ್ರಿ ಐರಾ ತಾತನ ಜೊತೆ ಹಾಡುತ್ತಾ ತುಂಟಾಟವಾಡುವ ವಿಡಿಯೋವೊಂದನ್ನು ರಾಧಿಕಾ ಪ್ರಕಟಿಸಿದ್ದು, ಇದನ್ನು ನೋಡಿದ ನೆಟ್ಟಿಗರು ಐರಾಳಿಗೆ ಅಯ್ಯೋ ಪಾಪ ಎನ್ನುತ್ತಿದ್ದಾರೆ.ಯಥರ್ವ್ ಮೈಕ್ ನ್ನು ಎತ್ತಿ ಬಿಸಾಕಿದ ರಭಸಕ್ಕೆ ಐರಾಗೆ ಏಟು ಬಿತ್ತು.