Widgets Magazine

ತಮ್ಮ ಇಬ್ಬರೂ ಮಕ್ಕಳ ಫೋಟೋ ಪ್ರಕಟಿಸಿದ ರಾಧಿಕಾ ಪಂಡಿತ್!

ಬೆಂಗಳೂರು| Krishnaveni K| Last Modified ಗುರುವಾರ, 14 ನವೆಂಬರ್ 2019 (16:10 IST)
ಬೆಂಗಳೂರು: ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನಟಿ ರಾಧಿಕಾ ಪಂಡಿತ್ ಈಗ ಇಬ್ಬರೂ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಇಬ್ಬರು ಮಕ್ಕಳ ಫೋಟೋವನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

 
ಮಕ್ಕಳ ದಿನಾಚರಣೆ ಪ್ರಯುಕ್ತ ತಮ್ಮ ಮಕ್ಕಳು ಆಡುತ್ತಿರುವ ಫೋಟೋ ಪ್ರಕಟಿಸಿ ಶುಭಾಷಯ ಕೋರಿದ್ದಾರೆ. ಜತೆಗೆ ನೋಡಿ ನನ್ನ ಇಬ್ಬರೂ ಮಕ್ಕಳೂ ಹೇಗೆ ಆಡ್ತಿದ್ದಾರೆ ಅಂತ ಎಂದು ಬರೆದುಕೊಂಡಿದ್ದಾರೆ.
 
ಆದರೆ ಫೋಟೋದಲ್ಲಿ ತಮ್ಮ ಮಗಳ ಜತೆಗೆ ಮಗನ ಫೋಟೋ ಪ್ರಕಟಿಸಿಲ್ಲ. ಬದಲಾಗಿ ಪತಿ ಯಶ್ ಮಗಳು ಐರಾ ಜತೆ ಆಡುವ ಫೋಟೋ ಪ್ರಕಟಿಸಿ ನೋಡಿ ನನ್ನ ಇಬ್ಬರೂ ಮಕ್ಕಳು ಆಡುವುದರಲ್ಲಿ ಬ್ಯುಸಿ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :