ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡಿ ಆಕೆ ಅಕ್ಷರಶಃ ಪುಟಾಣಿ ರಾಕಿಂಗ್ ಸ್ಟಾರ್ ಆಗಿದ್ದಾಳೆ.ಇದೀಗ ರಾಧಿಕಾ ಪಂಡಿತ್ ಮಗಳು ತನ್ನ ತಂದೆ-ತಾಯಿಯ ಫೋಟೋ ಗುರುತಿಸುವ ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕ್ಯೂಟ್ ವಿಡಿಯೋ ನೋಡಿ ಇಷ್ಟಪಟ್ಟ ಜನ ಒಂದು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅದೇನೆಂದರೆ ವಿಡಿಯೋದಲ್ಲಿ ರಾಧಿಕಾ ತಮ್ಮ ಮಗಳಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು. ಕೊಂಕಣಿ ರಾಧಿಕಾ