ಬೆಂಗಳೂರು: ನಟಿ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಜೋಡಿಗೆ ಇಂದು ವಿಶೇಷ ದಿನ. ಈ ದಿನದ ಬಗ್ಗೆ ರಾಧಿಕಾ ಪಂಡಿತ್ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಇಂದು ರಾಕಿಂಗ್ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡ ದಿನ. ತಮ್ಮ ಪ್ರೀತಿಯ ವಿಚಾರವನ್ನು ಜಗಜಗ್ಗಾಹೀರು ಮಾಡಿದ ದಿನ. ಅಂದಿನ ನಿಶ್ಚಿತಾರ್ಥದ ವಿಡಿಯೋ ಶೇರ್ ಮಾಡಿಕೊಂಡಿರುವ ರಾಧಿಕಾ, ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಪರ್ಫೆಕ್ಟ್ ದಿನವನ್ನು ನೆನೆಯಲು ಈ ವಿಡಿಯೋ ಹಂಚಿಕೊಂಡಿರುವೆ