ಸದ್ದಿಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಾಧಿಕಾ ಪಂಡಿತ್

ಬೆಂಗಳೂರು, ಶುಕ್ರವಾರ, 8 ಫೆಬ್ರವರಿ 2019 (16:20 IST)

ಬೆಂಗಳೂರು: ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿದ ಒಂದೇ ಒಂದು ಸಿನಿಮಾ ಆದಿಲಕ್ಷ್ಮಿ ಪುರಾಣ. ಅದೂ ಗರ್ಭಿಣಿಯಾಗಿದ್ದ ರಾಧಿಕಾ ಡಬ್ಬಿಂಗ್ ಮಾಡಿದ್ದ ಫೋಟೋ ವೈರಲ್ ಆಗಿತ್ತು.


 
ಅದಾದ ಬಳಿಕ ಈ ಸಿನಿಮಾ ಬಗ್ಗೆ ಏನೂ ಸುದ್ದಿಯೇ ಬಂದಿಲ್ವಲ್ಲಾ ಎಂದುಕೊಳ್ಳುತ್ತಿರುವವರೆಗೆ ರಾಧಿಕಾ ಇದ್ದಕ್ಕಿದ್ದಂತೆ ಸರ್ಪ್ರೈಸ್ ನೀಡಿದ್ದಾರೆ.
 
ಇಂದು ಸಂಜೆ 5 ಗಂಟೆಗೆ ರಾಧಿಕಾ ಅಭಿನಯದ ಆದಿಲಕ್ಷ್ಮಿ ಪುರಾಣ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಈ ಬಗ್ಗೆ ರಾಧಿಕಾ ಇಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಖುಷಿ ನೀಡಿದೆ. ಹಲವು ದಿನಗಳ ನಂತರ ರಾಧಿಕಾರನ್ನು ತೆರೆ ಮೇಲೆ ನೋಡುವ ಖುಷಿ ಅಭಿಮಾನಿಗಳದ್ದು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾದಲ್ಲಿ ರಾಧಿಕಾ ಜತೆಗೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಕುತೂಹಲವಿದ್ದರೆ ಕೆಲವೇ ಕ್ಷಣ ಕಾಯಿರಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ ಚಾಪ್ಟರ್ 2 ಗಾಗಿ ಬಾಲಿವುಡ್ ನ ಈ ಸೂಪರ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಬರ್ತಾರಾ?!

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಹೊಸ ಹವಾ ಎಬ್ಬಿಸಿದ ನಂತರ ಇದೀಗ ಕೆಜಿಎಫ್ 2 ಸಿನಿಮಾ ಬಗ್ಗೆ ಕುತೂಹಲ ...

news

ಮಗನ ಸಿನಿಮಾ ವಿಚಾರವಾಗಿ ಪೊಲೀಸರ ಮೊರೆ ಹೋದ ಅನಿತಾ ಕುಮಾರಸ್ವಾಮಿ!

ಬೆಂಗಳೂರು: ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ ನಟನಾಗಿ ಅಭಿನಯಿಸಿದ ಸೀತಾರಾಮ ಕಲ್ಯಾಣ ಸಿನಿಮಾ ವಿಚಾರವಾಗಿ ...

news

ಕೆಜಿಎಫ್ ದಾಖಲೆ ದೂಳೀಪಟ ಮಾಡಿದ ನಟಸಾರ್ವಭೌಮ? ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?!

ಬೆಂಗಳೂರು: ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮೊದಲ ದಿನವೇ ಬರೆದ ಸಿನಿಮಾ. ...

news

ಮದುವೆ ಸುದ್ದಿ ಹಬ್ಬಿಸುವ ಮಾವನ ಮೇಲೆ ಮುನಿಸಿಕೊಂಡ ಪ್ರಭಾಸ್?!

ಹೈದರಾಬಾದ್: ಆಗಾಗ ತಮ್ಮ ಮದುವೆ ಬಗ್ಗೆ ಪುಕಾರು ಹಬ್ಬಿಸುವ ಮಾವ ಕೃಷ್ಣರಾಜು ವಿರುದ್ಧ ಇದೀಗ ಬಾಹುಬಲಿ ...