ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೆಲವೊಂದು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಆ ಸಿನಿಮಾ ಸೆಟ್ಟೇರಿದೆ. ಅಮ್ಮನ ಮನೆ, ತ್ರಯಂಬಕಂ ಸಿನಿಮಾ ನಂತರ ರಾಘವೇಂದ್ರ ರಾಜ್ ಕುಮಾರ್ ಬಣ್ಣ ಹಚ್ಚುತ್ತಿರುವ ಮತ್ತೊಂದು ಸಿನಿಮಾ ಇದಾಗಿದ್ದು ಇದಕ್ಕೆ ಶ್ರೀ ಎಂದು ಹೆಸರಿಡಲಾಗಿದೆ.ವಿಶೇಷವೆಂದರೆ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ತಂದೆಯಾಗಿ ಅಭಿನಯಿಸುತ್ತಿದ್ದು, ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದು ಗೌಡ ಅವರ ಮಗನ ಪಾತ್ರ ನಿರ್ವಹಿಸುತ್ತಿದ್ದಾರೆ.