ಬೆಂಗಳೂರು: ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ರೀತಿಯಲ್ಲೇ ಜನಾನುರಾಗಿಯಾಗಿದ್ದ ಸಿನಿಮಾ ನಟನೆಂದರೆ ಅಂಬರೀಷ್. ಹೀಗಾಗಿ ಅವರ ಅಂತ್ಯ ಕ್ರಿಯೆ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿದೆ. ಡಾ. ರಾಜ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಸಮಾಧಿ ಮಾಡಲಾಗುತ್ತದೆಯೇ ಎಂಬ ಬಗ್ಗೆ ಡಾ. ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಬಳಿ ಪತ್ರಕರ್ತರು ಪ್ರಶ್ನಿಸಿದಾಗ ಇದನ್ನೆಲ್ಲಾ ತೀರ್ಮಾನ ಮಾಡಲು ನಾವ್ಯಾರು? ಸರ್ಕಾರ, ಕಲಾವಿಧರ ಸಂಘ ಏನು ನಿರ್ಧರಿಸುತ್ತದೋ ಅದಕ್ಕೆ