Widgets Magazine

ಮತ್ತೊಂದು ಧಾರವಾಹಿ ನಿರ್ಮಾಣಕ್ಕೆ ಮುಂದಾದ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು| Krishnaveni K| Last Modified ಶುಕ್ರವಾರ, 8 ನವೆಂಬರ್ 2019 (09:07 IST)
ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಸಿನಿಮಾ ನಿರ್ಮಾಣದಿಂದ, ಧಾರವಾಹಿ ನಿರ್ಮಾಣಕ್ಕೆ ಕಾಲಿಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ಯಶಸ್ಸನ್ನೂ ಕಂಡರು. ಈಗ ಮತ್ತೊಂದು ಧಾರವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

 
ಸ್ಟಾರ್ ಸುವರ್ಣ ವಾಹಿನಿಗಾಗಿ ರಾಘವೇಂದ್ರ ರಾಜ್ ಕುಮಾರ್ ಈಗಾಗಲೇ ಮರಳಿ ಬಂದಳು ಸೀತೆ ಎಂಬ ಧಾರವಾಹಿ ನಿರ್ಮಿಸುತ್ತಿದ್ದಾರೆ. ಇದೀಗ ಅದೇ ವಾಹಿನಿಗಾಗಿ ಮತ್ತೊಂದು ಧಾರವಾಹಿ ನಿರ್ಮಿಸಲು ಮುಂದಾಗಿದ್ದಾರೆ.
 
ಸದ್ಯದಲ್ಲೇ ಹೊಸ ಧಾರವಾಹಿ ಪ್ರಾರಂಭವಾಗಲಿದ್ದು, ಇದಕ್ಕೆ ಡಾ.ರಾಜ್ ಜನಪ್ರಿಯ ಹಾಡಿನ ಸಾಲು ‘ಜೀವ ಹೂವಾಗಿದೆ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಧಾರವಾಹಿಯಲ್ಲಿ ಬಹುತಾರಾಗಣವಿರಲಿದ್ದು, ಸದ್ಯದಲ್ಲೇ ಆರಂಭದ ದಿನಾಂಕ ಪ್ರಕಟವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :