ರಾಜ್ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ

ನವದೆಹಲಿ| Ramya kosira| Last Modified ಶನಿವಾರ, 7 ಆಗಸ್ಟ್ 2021 (16:20 IST)
ಅಶ್ಲೀಲ ಸಿನಿಮಾಗಳ (Pornography) ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ಗಳಲ್ಲಿ ಅವುಗಳ ಪ್ರಸಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ  ಅವರ ಗಂಡ ರಾಜ್ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆಯೂ ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದವು.
ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ತಕ್ಷಣದ ಬಿಡುಗಡೆ ಮಾಡುವಂತೆ ಕೋರಿ ರಾಜ್ ಕುಂದ್ರಾ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ರಾಜ್ ಕುಂದ್ರಾ ಹಾಗೂ ರಿಯಾನ್ ಥೋರ್ಪಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಜು. 27ರಂದು ರಾಜ್ ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಸಂಬಂಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ರಾಜ್ ಕುಂದ್ರಾ ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಎಸ್ ಗಡ್ಕರಿ ಅವರು ಅರ್ಜಿ ಸಲ್ಲಿಸಿರುವವರ ಬಂಧನ ಕಾನೂನು ಬದ್ಧವಾಗಿ ಆಗಿದೆ ಎಂದು ಹೇಳುವ ಮೂಲಕ ಮನವಿಯನ್ನು ತಿರಸ್ಕರಿಸಿದ್ದಾರೆ. ರಾಜ್ ಕುಂದ್ರಾ ಅವರನನು ಈ ಪ್ರಕರಣದಲ್ಲಿ ಜು. 19ರಂದು ಬಂಧಿಸಲಾಗಿತ್ತು. ಇನ್ನು ಆರೋಪಿ ಥೋರ್ಪಾ ಅವರು ರಾಜ್ ಕುಂದ್ರಾ ಅವರ ಸಂಸ್ಥೆಯಲ್ಲಿ ಐಟಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಇವರನ್ನು ಜು. 20ರಂದು ಬಂಧಿಸಲಾಯಿತು. ಸದ್ಯ ರಾಜ್ ಕುಂದ್ರಾ ಹಾಗೂ ಥೋರ್ಪಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.> ಉದ್ಯಮಿ ರಾಜ್ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಅಚ್ಚರಿಯ ಮಾಹಿತಿಗಳು ಹೊರ ಬೀಳುತ್ತಿವೆ. ರಾಜ್ ಕುಂದ್ರಾ ಅವರಿಗೆ ಅಶ್ಲೀಲ ವಿಡಿಯೋಗಳ ಕಂಟೆಂಟ್ ಮಾರಾಟ ಮಾಡುತ್ತಿದ್ದ ಆರೋಪಿಗಳು ಚಿತ್ರೀಕರಣಕ್ಕೆ ಹೇಗೆ ಒತ್ತಾಯಿಸುತ್ತಿದ್ದರು ಎನ್ನುವ ಮಾಹಿತಿ ಬಯಲಾಗಿದೆ. ಈ ವಿಷಯವನ್ನು ಸಂತ್ರಸ್ತೆಯರು ಬಯಲು ಮಾಡಿದ್ದಾರೆ. ಇನ್ನೂ ವಿಡಿಯೋ ಮಾರಾಟಗಾರರು ಇದೇ ಕಂಟೆಂಟ್ಗಳನ್ನು ಇನ್ನಿತರ ಆ್ಯಪ್ಗಳಿಗೂ ಮಾರಾಟ ಮಾಡುತ್ತಿದ್ದರು ಎನ್ನುವ ಅಂಶವೂ ಕೂಡ ಬಹಿರಂಗವಾಗಿದೆ.> ಇನ್ನು ನೀಲಿಚಿತ್ರಗಳ ನಿರ್ಮಾಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರದ ಆಯಮದಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈವರೆಗೆ ಪತಿಯ ಅಕ್ರಮ ಚಟುವಟಿಗಳಲ್ಲಿ ಶಿಲ್ಪಾರ ಪಾತ್ರ ಕಂಡು ಬಂದಿಲ್ಲ. ಶಿಲ್ಪಾಗೆ ತಿಳಿಯದೆ ರಾಜ್ಕುಂದ್ರಾ ನೀಲಿಚಿತ್ರಗಳನ್ನು ನಿರ್ಮಿಸುತ್ತಿದ್ದರು. ಈ ಬಗ್ಗೆ ತಿಳಿಯದ ಶಿಲ್ಪಾಗೆ ಆಘಾತವಾಗಿದೆ. ಮೊದಮೊದಲು ಪತಿಯನ್ನು ಬೆಂಬಲಿಸಿದ್ದ ಶಿಲ್ಪಾಗೆ ಈಗ ಭ್ರಮನೀರಸವಾಗಿದೆ. ತಮ್ಮ ಇಮೇಜ್ ಮತ್ತಷ್ಟು ಡ್ಯಾಮೇಜ್ ಆಗುವ ಮುನ್ನ ರಾಜ್ಕುಂದ್ರಾರಿಂದ ಅಂತರ ಕಾಯ್ದುಕೊಳ್ಳಲು ಶಿಲ್ಪಾ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಾಜ್ಕುಂದ್ರಾ ನಟಿ ಶಿಲ್ಪಾ ಶೆಟ್ಟಿನ 2ನೇ ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದು, ಬಾಡಿಗೆ ತಾಯಿ ಮೂಲಕ ಮಗಳನ್ನು ಪಡೆದುಕೊಂಡಿದ್ದಾರೆ. ರಾಜ್ಕುಂದ್ರಾ ಬಂಧನ ಅವರ ದಾಂಪತ್ಯದಲ್ಲೂ ಬಿರುಗಾಳಿ ಎಬ್ಬಿಸಿದೆ
 ಇದರಲ್ಲಿ ಇನ್ನಷ್ಟು ಓದಿ :