ಕಳೆದ ನಾಲ್ಕು ವರ್ಷಗಳಿಂದ ಕೇವಲ ಒಂದೇ ಒಂದು ಸಿನಿಮಾದಲ್ಲಿ ತೊಡಗಿಕೊಂಡಿರುವ ಟಾಲಿವುಡ್ ಹೀರೋ ಪ್ರಭಾಸ್ಗೆ ಕಡೆಗೂ ಮುಕ್ತಿ ಸಿಕ್ಕಿದೆ. ಇಲ್ಲಿಯವರೆಗೆ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿರುವ ಬಾಹುಬಲಿ ಡಿಸೆಂಬರ್ 27ಕ್ಕೆ ಶೂಟಿಂಗ್ಗೆ ಪ್ಯಾಕಪ್ ಹೇಳಲಿದೆ. ಬಾಹುಬಲಿ ಮೊದಲ ಭಾಗ ಸೂಪರ್ ಹಿಟ್ ಆಗುವುದರೊಂದಿಗೆ ಇದೀಗ ಬರುತ್ತಿರುವ ಪಾರ್ಟ್ 2 ಬಗ್ಗೆ ಭಾರಿ ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದ್ದು, ತಂತ್ರಜ್ಞಾನ, ಮೇಕಿಂಗ್ ಎಲ್ಲವನ್ನೂ ಅದ್ಭುತವಾಗಿ ತರುತ್ತಿದೆ ಚಿತ್ರತಂಡ.