ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಆರೋಗ್ಯ ತಪಾಸಣೆಗಾಗಿ ಅಮೆರಿಕಾ ದೇಶಕ್ಕೆ ತೆರಳಿದ್ದಾರೆ. ಅವರು ಆರೋಗ್ಯವಾಗಿದ್ದು, ಇದೊಂದು ಸಾಮಾನ್ಯ ತಪಾಸಣೆಯಷ್ಟೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ. ಕೆ. ಶಂಕರ್ ಅವರ ಸಿನಿಮಾ ಎಂಥಿರನ್ ಚಿತ್ರದ ಎರಡನೇ ಭಾಗ 2.ಒ ದಲ್ಲಿ ರಜನಿ ಅಭಿನಯಿಸುತ್ತಿದ್ದು, ಚಿತ್ರದ ಮಾತಿನ ಭಾಗ ಚಿತ್ರೀಕರಣ ಮುಗಿಸಿದ ಬಳಿಕ ರಜನಿ ವಿದೇಶದ ವಿಮಾನ ಏರಿದ್ದಾರೆ.ಎರಡು ವಾರಗಳೊಳಗೆ ವಾಪಸ್ ಬಂದು ಕಬಾಲಿ ಚಿತ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ಭರವಸೆ