ರಸ್ತೆಗಳೆಂದರೆ ಕತ್ರಿನಾ ಕೈಫ್ ಕೆನ್ನೆಯಂತಿರಬೇಕು! ರಾಜಸ್ಥಾನ್ ಸಚಿವನ ವಿವಾದಿತ ಹೇಳಿಕೆ

ಜೈಪುರ| Krishnaveni K| Last Modified ಬುಧವಾರ, 24 ನವೆಂಬರ್ 2021 (16:59 IST)
ಜೈಪುರ: ರಸ್ತೆಗಳೆಂದರೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆನ್ನೆಯಷ್ಟು ನುಣುಪಾಗಿರಬೇಕು ಎಂದು ರಾಜಸ್ಥಾನ್ ರಾಜ್ಯ ಸರ್ಕಾರದ ಸಚಿವ ರಾಜೇಂದ್ರ ಸಿಂಗ್ ಗುಧಾ ವಿವಾದಿತ ಹೇಳಿಕೆ ನೀಡಿದ್ದಾರೆ.

ಹೊಸದಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರಾಜೇಂದ್ರ ಸಿಂಗ್ ತಮ್ಮ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಕುರಿತಂತೆ ಬಹಿರಂಗ ಸಭೆಯಲ್ಲಿ ಅಧಿಕಾರಿಗಳಿಗೆ ಈ ರೀತಿಯಾಗಿ ಸಲಹೆ ನೀಡಿದ್ದಾರೆ.


ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಕೂಡಾ ರಸ್ತೆಯನ್ನು ನಟಿ ಹೇಮ ಮಾಲಿನಿ ಕೆನ್ನೆಗೆ ಹೋಲಿಸಿ ವಿವಾದಕ್ಕೊಳಗಾಗಿದ್ದರು.


ಇದರಲ್ಲಿ ಇನ್ನಷ್ಟು ಓದಿ :