ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ದ್ವಿತೀಯ ಪುತ್ರಿ ಸೌಂದರ್ಯ ರಜನೀಕಾಂತ್ ಫೆಬ್ರವರಿ 10 ರಂದು ಉದ್ಯಮಿ ವಿಶಾಖನ್ ಎಂಬವರನ್ನು ಮದುವೆಯಾಗಲಿದ್ದು, ಇದಕ್ಕಾಗಿ ರಜನಿ ನಿವಾಸದಲ್ಲಿ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ.ರಜನೀಕಾಂತ್ ಅವರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ವಿವಾಹ ಸಮಾರಂಭಕ್ಕಾಗಿ ಪೊಲೀಸ್ ಭದ್ರತೆ ಒದಗಿಸುವಂತೆ ರಜನಿ ಪತ್ನಿ ಲತಾ ರಜನೀಕಾಂತ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.2017 ರಲ್ಲಿ ಅಶ್ವಿನ್ ಕುಮಾರ್ ಗೆ ವಿಚ್ಛೇದನ ನೀಡಿದ್ದ ಸೌಂದರ್ಯ ಈಗ