ಸಿಎಎ ಕುರಿತಾಗಿ ಹೇಳಿಕೆ ನೀಡಿದ ರಜನೀಕಾಂತ್ ವಿರುದ್ಧ ತಿರುಗಿಬಿದ್ದ ಟ್ವಿಟರಿಗರು

ಚೆನ್ನೈ| Krishnaveni K| Last Modified ಶುಕ್ರವಾರ, 20 ಡಿಸೆಂಬರ್ 2019 (09:31 IST)
ಚೆನ್ನೈ: ಪೌರತ್ವ ಖಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿ ಸೂಪರ್ ಸ್ಟಾರ್ ರಜನೀಕಾಂತ್ ಮಾಡಿದ ಟ್ವೀಟ್ ಒಂದು ಈಗ ಪರ-ವಿರೋಧ ಟೀಕೆಗೆ ಗುರಿಯಾಗಿದೆ.

 
ಯಾವುದೇ ಸಮಸ್ಯೆಗೂ ಹಿಂಸೆ ಪರಿಹಾರವಲ್ಲ. ಏನೇ ವಿರೋಧಗಳಿದ್ದರೂ ಶಾಂತ ರೀತಿಯಿಂದ ಬಗೆಹರಿಸೋಣ. ಪ್ರತಿಭಟನೆ ಮಾಡಿದ ಶಾಂತಿ ಕದಡಬೇಡಿ ಎಂದು ರಜನೀಕಾಂತ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದರು.
 
ಆದರೆ ಇದಕ್ಕೆ ಕೆಲವರು ತಿರುಗೇಟು ನೀಡಿದ್ದು, ಹಾಗಿದ್ದರೆ ಏನೇ ಮಾಡಿದರೂ ಬಾಯಿ ಮುಚ್ಚಿಕೊಂಡಿರಬೇಕಾ? ರಾಜಕೀಯಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ ಎಂದು ರಜನೀಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ರಜನಿ ವಿರುದ್ಧವಾಗಿ ಶೇಮ್ ಆನ್ ಯೂ ರಜನಿ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನ ಆರಂಭಿಸಿದ್ದರೆ ಇನ್ನು ಕೆಲವರು ಇದಕ್ಕೆ ಪ್ರತಿಯಾಗಿ ಐ ಸ್ಟಾಂಡ್ ವಿತ್ ರಜನಿ ಎಂದು ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ. ಒಟ್ಟಾರೆ ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ವಿವಾದವಾಗುವ ಹಂತಕ್ಕೆ ತಲುಪಿದೆ.
ಇದರಲ್ಲಿ ಇನ್ನಷ್ಟು ಓದಿ :