ಚೆನ್ನೈ: ಹೊಸ ವರ್ಷದ ವೇಳೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಪಕ್ಷ ಘೋಷಣೆ ಮಾಡುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಂದು ಚೆನ್ನೈನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಟಿ ನಗರದ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳೊಂದಿಗೆ ರಜನಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ.ಈಗಾಗಲೇ ಭಾಷಣ ಆರಂಭಿಸಿರುವ ರಜನೀಕಾಂತ್ ತಮ್ಮ ಸಿನಿ ಬದುಕಿನ ಬಗ್ಗೆ, ಆರಂಭದ ದಿನಗಳ