ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇಂದು ಚೆನ್ನೈನಲ್ಲಿ ಅಭಿಮಾನಿಗಳ ಜತೆ ಮಹತ್ವದ ಸಭೆ ನಡೆಸಿದ್ದು ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 31 ರಂದು ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮನ್ನು ಬೆಳೆಸಿದ ನಿರ್ದೇಶಕರಾದ ಕೆ ಬಾಲಚಂದರ್ ಅವರನ್ನು ಸ್ಮರಿಸಿದ್ದಾರೆ.ತಮಗೆ ರಾಜಕೀಯ ಹೊಸದಲ್ಲ. ರಾಜಕೀಯ ನಾಯಕರೊಂದಿಗೆ ಹಲವು ವರ್ಷಗಳೊಂದಿಗೂ ಒಡನಾಟವಿದೆ. ನನ್ನ ಅಭಿನಯ ಮೆಚ್ಚಿ