ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇಂದು ನನ್ನ ಪಾಲಿಗೆ ಎರಡು ಕಾರಣಗಳಿಗೆ ವಿಶೇಷ ದಿನ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದಾರೆ ಇಂದು ಅಂತಹ ಸ್ಪೆಷಲ್ ಏನಿದೆ ಗೊತ್ತಾ?ಕೆಲವು ದಿನಗಳ ಹಿಂದೆ ರಜನೀಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಸಿನಿಮಾದಲ್ಲಿನ ಸಾಧನೆಗಾಗಿ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇಂದು ರಜನಿ ದೆಹಲಿಗೆ ತೆರಳಿ ಸ್ವೀಕರಿಸಲಿದ್ದಾರೆ.ಎರಡನೆಯದಾಗಿ ತಮ್ಮ ಪುತ್ರಿ ಸೌಂದರ್ಯ ಲಾಂಚ್ ಮಾಡುತ್ತಿರುವ ಹೊಸ ಆಪ್ ಹೂಟೆ ಇಂದು ಲೋಕಾರ್ಪಣೆಯಾಗಲಿದೆ.