ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.ಈ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಣೆ ನೀಡಿದ್ದಾರೆ. ನಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಘೋಷಿಸಿದ್ದಾರೆ.’18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಗಳಾಗಿ ಜೊತೆಯಾಗಿ ಜೀವನ ನಡೆಸಿದ್ದೇವೆ. ಇಂದು ನಾವಿಬ್ಬರೂ ನಮ್ಮ ದಾರಿಯಲ್ಲಿ ಪ್ರತ್ಯೇಕವಾಗಿ ನಡೆಯಲು ನಿರ್ಧರಿಸಿದ್ದೇವೆ. ನಾನು ಮತ್ತು ಐಶ್ವರ್ಯಾ ದಂಪತಿಯಾಗಿ