Photo Courtesy: Twitterಬೆಂಗಳೂರು: ಪುನೀತ್ ರಾಜ್ ಕುಮಾರ್ ತೀರಿಕೊಂಡಾಗ ತಾನು ಬರದೇ ಇರುವುದಕ್ಕೆ ನಿಜ ಕಾರಣವೇನೆಂದು ಸೂಪರ್ ಸ್ಟಾರ್ ರಜನೀಕಾಂತ್ ಇಂದು ಬಯಲು ಮಾಡಿದ್ದಾರೆ.ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ರಜನಿ, ಪುನೀತ್ ಬಗ್ಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.‘ಪುನೀತ್ ತೀರಿಕೊಂಡಾಗ ನನಗೆ ಆಪರೇಷನ್ ಆಗಿ ಐಸಿಯುವಿನಲ್ಲಿದ್ದೆ. ಹೀಗಾಗಿ ಆಗ ವಿಷಯ ಹೇಳುವುದು ಬೇಡ ಎಂದು ನನಗೆ ಮೂರು ದಿನ ಕಳೆದ ಮೇಲೆ ಸುದ್ದಿ ತಿಳಿಸಿದರು.