ಮುಂಬೈ: ಜಿಮ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿದ್ದ ನಟ ರಾಜು ಶ್ರೀವಾಸ್ತವ ಬಹಳ ದಿನಗಳ ವೈದ್ಯಕೀಯ ಪ್ರಯತ್ನದ ಫಲವಾಗಿಯೂ ಬದುಕುಳಿಯಲೇ ಇಲ್ಲ. ಇಂದು ಅವರು ನಿಧನರಾಗಿದ್ದಾರೆ.ರಾಜು ಶ್ರೀವಾಸ್ತವ ಹೃದಯಾಘಾತಕ್ಕೊಳಗಾದ ವಿಚಾರ ಭಾರೀ ಸದ್ದು ಮಾಡಿತ್ತು. ಥೇಟ್ ಪುನೀತ್ ರಾಜ್ ಕುಮಾರ್ ರಂತೇ ಜಿಮ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ ಕುಸಿದು ಬಿದ್ದಿದ್ದರು. ಆಗಸ್ಟ್ 10 ರಂದು ಈ ಘಟನೆ ನಡೆದಿತ್ತು.ಇಷ್ಟು ದಿನ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.