ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಬಂದು ವರ್ಷಗಳೇ ಆಯಿತು. ರಕ್ಷಿತ್ ರನ್ನು ಮತ್ತೆ ತೆರೆ ಮೇಲೆ ನೋಡಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಮತ್ತೊಂದು ನಿರಾಸೆಯ ಸುದ್ದಿ ಬಂದಿದೆ.ರಕ್ಷಿತ್ ಅಭಿನಯದ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಭರ್ಜರಿ ಸದ್ದು ಮಾಡಿತ್ತು. ಈ ಸಿನಿಮಾ ಆಗಸ್ಟ್ ನಲ್ಲಿ ತೆರೆಗೆ ಬರಬಹುದು ಎಂದು ಹೇಳಲಾಗಿತ್ತು. ಆದರೆ ಇದೀಗ ಮುಂದಕ್ಕೆ ಹೋಗಿದೆ.ಆದರೆ ಅವನೇ ಶ್ರೀಮನ್ನಾರಾಯಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಮುಗಿದಿಲ್ಲ. ಗ್ರಾಫಿಕ್ಸ್ ಕೆಲಸಗಳು