ಬೆಂಗಳೂರು: ಲಾಕ್ ಡೌನ್ ವೇಳೆ ಹೊರಗಡೆ ಹೋಗಿ ಶೂಟಿಂಗ್ ಮಾಡಲಾಗುತ್ತಿಲ್ಲ. ಸಿನಿಮಾ ಕೆಲಸಗಳನ್ನು ನಡೆಸಲಾಗುತ್ತಿಲ್ಲ ಎಂದು ತಲೆಮೇಲೆ ಕೈ ಹೊತ್ತು ಕೂರುವ ಬದಲು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪರಿಸ್ಥಿತಿಯ ಲಾಭ ಪಡೆಯಲು ಹೊರಟಿದ್ದಾರೆ.ಕಳೆದ ಕೆಲವು ದಿನಗಳಿಂದ ಪುಣ್ಯಕೋಟಿ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ರಕ್ಷಿತ್ ಎರಡು ವಾರಗಳ ಬ್ರೇಕ್ ತೆಗೆದುಕೊಂಡು ಈಗ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರಂತೆ.ಇದು ಸಂಪೂರ್ಣವಾಗಿ ವಿಭಿನ್ನವಾಗಿರಲಿದ್ದು, ಸೀಮಿತ ಚೌಕಟ್ಟಿನಲ್ಲಿ, ಲೊಕೇಷನ್ ನಲ್ಲಿ ಶೂಟಿಂಗ್ ನಡೆಸಬಹುದಾದ ಶಾರ್ಟ್