ಪುನೀತ್, ದಿಗಂತ್ ಗೆ ಸವಾಲು ಹಾಕಿದ ರಕ್ಷಿತ್ ಶೆಟ್ಟಿ

ಬೆಂಗಳೂರು| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (09:28 IST)
ಬೆಂಗಳೂರು: ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವ ನಟ ರಕ್ಷಿತ್ ಶೆಟ್ಟಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಿಗಂತ್, ಸಂಯುಕ್ತ ಹೆಗ್ಡೆ ಮತ್ತು ಇಮ್ರಾನ್ ಸರ್ದಾರಿಯಾಗೆ ಹೊಸ ಸವಾಲು ಕೊಟ್ಟಿದ್ದಾರೆ.

 
ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಹಾಡಿನ ಸ್ಟೆಪ್ ಈಗ ವೈರಲ್ ಆಗಿದ್ದು, ಈ ಹಾಡಿನ ಸಿಗ್ನೇಚರ್ ಸ್ಟೆಪ್ ನ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ಇದೀಗ ರಕ್ಷಿತ್ ಶೆಟ್ಟಿ ಈ ಸಿಗ್ನೇಚರ್ ಸ್ಟೆಪ್ ಮಾಡುವುದನ್ನು ವಿಡಿಯೋ ಮಾಡಿ ಪವರ್ ಸ್ಟಾರ್ ಪುನೀತ್, ಇಮ್ರಾನ್ ಸರ್ದಾರಿಯಾ, ಸಂಯುಕ್ತಾ ಹೆಗಡೆ ಮತ್ತು ದಿಗಂತ್ ಮಂಚಾಲೆಗೆ ಈ ಚಾಲೆಂಜ್ ನೀಡಿದ್ದಾರೆ. ಇವರ ಪೈಕಿ ಇಮ್ರಾನ್ ಸರ್ದಾರಿಯಾ ಮಾತ್ರ ಸವಾಲು ಸ್ವೀಕರಿಸಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಈ ಸ್ಟೆಪ್ ಹಾಕಿರುವ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಉಳಿದವರು ರಕ್ಷಿತ್ ಸವಾಲಿಗೆ ಇನ್ನಷ್ಟೇ ಉತ್ತರಿಸಬೇಕಿದೆ.




ಇದರಲ್ಲಿ ಇನ್ನಷ್ಟು ಓದಿ :