ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವರ್ಷಾಂತ್ಯದಲ್ಲಿ ಬ್ಯಾಚುಲರ್ಸ್ ಗಾಗಿ ಭರ್ಜರಿ ಹಾಡೊಂದನ್ನು ಹೊರಬಿಡಲಿದ್ದಾರೆ.ರಕ್ಷಿತ್ ಒಡೆತನದ ಪರಂವಾ ಸ್ಟುಡಿಯೋಸ್ ನಿರ್ಮಾಣದ ಬ್ಯಾಚುಲರ್ಸ್ ಪಾರ್ಟಿ ಸಿನಿಮಾದ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ. ಇದು ಅಪ್ಪಟ ಬ್ರಹ್ಮಚಾರಿಗಳಿಗೇ ಇರುವ ಹಾಡು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಕಿರಿಕ್ ಪಾರ್ಟಿಯಂತೇ ಮತ್ತೊಂದು ಕಾಮಿಡಿ ಎಂಟರ್ ಟೈನರ್ ಸಿನಿಮಾ ಬ್ಯಾಚುಲರ್ ಪಾರ್ಟಿ. ಈ ಸಿನಿಮಾ ಜನವರಿ 26 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗುತ್ತಿದೆ.ಈ ಹಿಂದೆ