ಬೆಂಗಳೂರು: ಇಂದು ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾ ವೀಕ್ಷಿಸಿದವರೆಲ್ಲರೂ ರಕ್ಷಿತ್ ಶೆಟ್ಟಿ ಕಮ್ ಬ್ಯಾಕ್ ಎಂದು ಹಾಡಿಹೊಗಳುತ್ತಿದ್ದಾರೆ.ದ್ವಿತೀಯಾರ್ಧದಲ್ಲಿ ಚಾರ್ಲಿ ಪ್ರೇಕ್ಷಕರನ್ನು ಅಳಿಸುತ್ತಾನೆ. ಕ್ಲೈಮ್ಯಾಕ್ಸ್ ಅಂತೂ ಸೂಪರ್ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.ಇನ್ನು, ಇಂದು ಮೊದಲ ದಿನದ ಶೋವನ್ನು ಇಡೀ ಚಾರ್ಲಿ ತಂಡ ಜೊತೆಯಾಗಿ ಕೂತು ವೀಕ್ಷಿಸಿದೆ. ಅದರಲ್ಲೂ ರಕ್ಷಿತ್ ಮತ್ತು ಚಾರ್ಲಿ ಜೊತೆಯಾಗಿ ಕೂತು ತಮ್ಮ ಸಿನಿಮಾ ವೀಕ್ಷಿಸಿದ್ದು ವಿಶೇಷ.