ಒಳ್ಳೆ ಹುಡುಗ ಪ್ರಥಮ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹಾಯ

ಬೆಂಗಳೂರು| Krishnaveni K| Last Modified ಭಾನುವಾರ, 17 ನವೆಂಬರ್ 2019 (08:53 IST)
ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ‘ನಟ ಭಯಂಕರ’. ಈ ಸಿನಿಮಾ ಕೆಲಸಗಳು ಇನ್ನೂ ಮುಗಿದಿಲ್ಲ. ಈಗ ಪ್ರಥಮ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹಾಯ ಮಾಡಲಿದ್ದಾರೆ.

 
ನಟ ಭಯಂಕರ ಸಿನಿಮಾದ ಎರಡನೇ ಹಾಡು ‘ಗೀತಾ ಗೀತಾ ಗಾಂಚಾಲಿ ಗೀತಾ’ ಎಂಬ ಹಾಡು ಇಂದು ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಾಡನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡುತ್ತಿದ್ದಾರೆ.
 
ಈ ಸಿನಿಮಾದ ಮೊದಲ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದರು. ಅದು ಹಿಟ್ ಆಗಿತ್ತು. ಈಗ ಎರಡನೇ ಹಾಡಿನ ಬಿಡುಗಡೆಯಾಗುತ್ತಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :