ಡಿ ಬಾಸ್ ದರ್ಶನ್ ಜತೆ ರಕ್ಷಿತಾ ಪ್ರೇಮ್ ಫೋಟೋ ವೈರಲ್

ಬೆಂಗಳೂರು| Krishnaveni K| Last Modified ಶನಿವಾರ, 28 ಸೆಪ್ಟಂಬರ್ 2019 (08:37 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಜೋಡಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಕೂಡಾ ಒಂದು. ಈ ಇಬ್ಬರೂ ತೆರೆ ಮೇಲೆ ಮಾಡಿದ ಮೋಡಿ ಇಂದಿಗೂ ಪ್ರೇಕ್ಷಕರು ಮರೆಯಲಾರರು.

 
ಈಗ ಮತ್ತೆ ಈ ಜೋಡಿ ಜತೆಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಸಿನಿಮಾ ಹೊರತಾಗಿಯೂ ಇವರಿಬ್ಬರೂ ಉತ್ತಮ ಸ್ನೇಹಿತರು. ಹೀಗಾಗಿ ದರ್ಶನ್ ಭೇಟಿಯಾದಾಗ ರಕ್ಷಿತಾ ಫೋಟೋ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸುಂಟರಗಾಳಿ ಜೋಡಿಗೆ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಲೈಕ್, ಕಾಮೆಂಟ್ ನೀಡುತ್ತಿದ್ದಾರೆ.
 
‘ದರ್ಶನ್ ಫ್ರೆಂಡ್ ಫಾರ್ ಲೈಫ್. ಇದೊಂದು ಅದ್ಭುತ ಸಂಜೆಯಾಗಿತ್ತು’ ಎಂದು ರಕ್ಷಿತಾ ಫೋಟೋ ಸಮೇತ ಬರೆದುಕೊಂಡಿರುವುದನ್ನು ನೋಡಿ ನಿಮ್ಮಿಬ್ಬರ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಬೇಕು ಮ್ಯಾಡಂ ಎಂದು ರಕ್ಷಿತಾಗೆ ಮೆಸೇಜ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :