ಬೆಂಗಳೂರು: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಂದೆ, ಛಾಯಾಗ್ರಾಹಕರಾಗಿದ್ದ ದಿವಂಗತ ಗೌರೀಶಂಕರ್ ಬಗ್ಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ತಮ್ಮ ತಂದೆಯ ಪುಣ್ಯಸ್ಮರಣೆಯ ದಿನದಂದು ರಕ್ಷಿತಾ ಇಂತಹದ್ದೊಂದು ಭಾವುಕ ಸಂದೇಶ ಬರೆದುಕೊಂಡಿದ್ದಾರೆ. ನೀವು ಹೋಗಿ 16 ವರ್ಷಗಳೇ ಕಳೆದಿವೆ. ಆದರೆ ನಿಮ್ಮ ಬಗ್ಗೆ ಯೋಚಿಸದ ಒಂದು ದಿನವೂ ಇರಲಿಲ್ಲ. ನಮ್ಮ ಜೀವನದಲ್ಲಿ ನೀವಿಲ್ಲದೇ ಎಷ್ಟೋ ವಿಚಾರಗಳನ್ನು ಮಿಸ್ ಮಾಡಿಕೊಂಡಿದ್ದೇವೆ. ನಿಮ್ಮ ಬಗ್ಗೆ ಯೋಚಿಸುವಾಗ ನನಗೆ ತುಂಬಾ ನೋವಾಗುತ್ತದೆ. ನೀವು ಯಾವತ್ತೂ ನನ್ನ